Submission 3568

ನೆಲ್ಲು ಎಸೆಯಬೇಡ ಮತ್ತೆ

ರಚನೆ : ಡಾಲಿ

----------------------------------

ಜೊಳ್ಳುಭತ್ತ ಕಂದಳಿಯಾಗಿ ಹಸಿರುಗಟ್ಟಿದೆ ಅದನ್ನ ಕಿತ್ತು ತಂದ ಮಗ ರೂಬಾಗಿ ಉಲಿಯುತ್ತಿದ್ದಾನೆ. ಅಗೆ ಕಟ್ಟು ತಂದಿದ್ದೇನೆ ಅಜ್ಜ ಉಳುಮೆ ಮಾಡಿದ ಗದ್ದೆಯಲ್ಲಿ ನೆಡೋಣ ಬಾ. ಜೊಳ್ಳು ಬೀಜದ ಸಸಿ ತೆನೆಬಾಗಲಾರದೆಂದರೆ ಪ್ರಶ್ನೆಗಳ ಮಹಾಪೂರ, ಜೊಳ್ಳಿಗೂ ಭತ್ತದ ಭಾರಕ್ಕೂ ವ್ಯತ್ಯಾಸವರಿಯದವನೆದುರು ತಲೆ ಅಲ್ಲಾಡಿಸಿದೆ. ಆ ಸಸಿಗಳನೇ ಪೋಶಿಸಿ ಅವನೆತ್ತರ ಬೆಳೆದ ತೆನೆಗಳ ಕೊಯ್ದು ಹಡಿಮಂಚದ ಮೇಲೆ ಅರಿಗಳಿಂದ ಗಲಿತಗೊಂಡ ಭತ್ತದ ಮೂಟೆ ನನ್ನೆದುರಿಗಿಟ್ಟವನ ಸೊಲ್ಲು ಹೀಗಿತ್ತು. ಜೊಳ್ಳು ಭತ್ತವಾಗಿ ಬಾಗಿದೆ ನೋಡಮ್ಮಾ ಹಾ ನೆಲ್ಲು ಎಸೆಯಬೇಡ ಮತ್ತೆ.

----------------------------------

ನೋಂದಣಿ ಐಡಿ : KPFS2-7432

0
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top