ಯೌವ್ವನ
ರಚನೆ : ಸುಕೃತಾ ಎಸ್ ಭಟ್
----------------------------------
ಈಗಿರುವ ಕಾಲ ಹಿಂದಕ್ಕೆ ಹೋಗಬಾರದೇ ? ಜವಾಬ್ದಾರಿಯೆಂಬ ಪದವನ್ನು ಕೇಳದೇ ಇದ್ದ ಜೀವನ, ಯಾವುದರ ಯೋಚನೆಯೇ ಇಲ್ಲದಂಥ ಮನ, ಇವೆಲ್ಲದರ ಪರಿವೇ ಇಲ್ಲದಾಗ ಬಂತೇ ಬಂತು ಯೌವ್ವನ ! ಹೊಣೆ, ಹಸೆಮಣೆ ಎಂಬ ಮೆಟ್ಟಿಲನ್ನು ತಂದು, ನೀನು ಹೆಣ್ಣು ಇದ ಹತ್ತಬೇಕು ಎಂದು, ಹೊಸದಾಗಿ ಪಯಣವೊಂದು ಸಾಗಿದೆ ಮುಂದು, ಇದೆಲ್ಲ ಯಾವಾಗ ಆಯಿತೆಂದು ಗೊತ್ತಾಗಲ್ಲಿಲ್ಲವೆಂದು ?! ಮತ್ತೊಮ್ಮೆ ನೆನಪಾಗುವುದು ಆ ಬಾಲ್ಯತನ, ಎಂದೂ ನಿರೀಕ್ಷೆಯೇ ಇಲ್ಲದ ಆ ಗೆಳೆತನ, ಇದು ನನ್ನ ಯೋಚನಾ ಲಹರಿಯಲ್ಲಿರುವ ಚಿರ ಹೊಸತನ, ಇವೆಲ್ಲದರ ಪರಿವೇ ಇಲ್ಲದಾಗ ಬಂತೇ ಬಂತು ಯೌವ್ವನ !
----------------------------------
ನೋಂದಣಿ ಐಡಿ : KPFS2-7365