Submission 3480

ಮರೆಯಾಗದಿರು ಒಲವೇ

ರಚನೆ : ವಸಂತರಾಜ್ ಅರಸ್

----------------------------------

ಅರಿವಿಗೆ ಬಾರದೆ ಬಂದೆನ್ನ ಹೃದಯವ ಸೇರಿದೆ ಅಂದಿನಿಂದ ಈ ಹೃದಯ ನಿನ್ನೊಲವನ್ನೆ ಕೋರಿದೆ ನಿನ್ನಿಂದಲೇ ಈ ಹೃದಯ ಪ್ರೇಮರಾಗವ ನುಡಿದಿದೆ ನಿನ್ನೊಲವಿಗಾಗಿ ಈ ಹೃದಯವೀಣೆಯು ಮಿಡಿದಿದೆ ಅರೆಘಳಿಗೆಯೂ ನನ್ನಿಂದ ದೂರಾಗದಿರು ಚೆಲುವೆ ಕನಸಲ್ಲಿಯೂ ನನ್ನಿಂದ ಬೇರಾಗದಿರು ಒಲವೆ ನೀ ಬಂದಂದಿನಿಂದ ನನಗೆಲ್ಲವೂ ನೀನಲ್ಲವೇ ನೀ ದೂರಾದ ಮರುಕ್ಷಣವೇ ಈ ಜೀವಕೆ ಸಾವಲ್ಲವೇ ಹಸಿದ ಹೃದಯಕೆ ಒಲವ ಕೈತುತ್ತನ್ನ ಕೊಟ್ಟವಳೆ ಬರಡಾದ ಬದುಕಲ್ಲಿ ಸ್ನೇಹವೆಂಬ ಸಸಿಯನ್ನ ನೆಟ್ಟವಳೆ ಇಷ್ಟೆಲ್ಲಾ ಪ್ರೀತಿಕೊಟ್ಟು ಮರೆಯಾಗದಿರು ಒಲವೇ ಈ ಬದುಕಿಗೆ ನಿಜವಾಗಿಯೂ ನಿನ್ನೊಲವೇ ಬಲವೇ

----------------------------------

ನೋಂದಣಿ ಐಡಿ : KPFS2-7366

0
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top