ಅಪ್ಪನೆಂಬ ಭರವಸೆಯ ಬೆಳಕು
ರಚನೆ : ಸುನಿತಾ. ಎಂ ನಾಯ್ಕ್
----------------------------------
ತನ್ನ ಹೆಗಲ ಮೇಲೆ ಎಷ್ಟೇ ಭಾರವಿದ್ದರೂ ನಮ್ಮನ್ನು ಅವನ ಹೆಗಲ ಮೇಲೆ ಕೂರಿಸಿಕೊಂಡು ಖುಷಿಪಡಿಸುವವನು ತನ್ನ ಚಪ್ಪಲಿ ಹರಿದಿದ್ದರೂ ನಮಗೆ ಹೊಸ ಚಪ್ಪಲಿ ಕೊಡಿಸಿ ನಮ್ಮ ಆಸೆಗಳನ್ನು ಪೂರೈಸುವವನು ತಾನು ರೈತನಾಗಿ ಕಷ್ಟ ಪಟ್ಟಿದ್ದು ಸಾಕೆಂದು ತನ್ನ ಮಕ್ಕಳು ದೊಡ್ಡ ಅಧಿಕಾರಿ ಆಗಬೇಕೆಂದು ಕನಸು ಕಾಣುವವನು ತನ್ನ ಕಷ್ಟ ಯಾರಿಗೂ ತೋರಿಸದೆ ಎಲೆ ಮರೆ ಕಾಯಂತೆ ನಮ್ಮ ಬೆನ್ನ ಹಿಂದೆ ಬೆಂಗಾವಲಾಗಿ ನಿಂತು ಕುಟುಂಬಕ್ಕಾಗಿ ಹಗಲಿರುಳು ದುಡಿಯುವ ಆ ಜೀವವೇ "ಅಪ್ಪ"
----------------------------------
ನೋಂದಣಿ ಐಡಿ : KPFS2-7341