ಮಲಗು ಮಲಗೆನ್ನ ಓ ಮುದ್ದು ಕಂದ
ರಚನೆ : ಸುನಿಲ್ ತಿಪಟೂರು
----------------------------------
ಮಲಗು ಮಲಗೆನ್ನ ಓ ಮುದ್ದು ಕಂದ, ಮಲಗಿರುವ ಮೊಗವು ಮತ್ತಷ್ಟು ಚಂದ.. ದಿನವೆಲ್ಲಾ ಕಾಡಿ, ಆಡಿ ಕುಣಿದಾಡಿ, ಮಡಿಲನ್ನು ಸೇರುವೆ ಬಂದು ಓಡೋಡಿ... ಎಲ್ಲಿಯದೋ ದುಃಖ ಯಾತಕೋ ಕಿರುನಗೆಯು, ಯಾರೊಂದಿಗೋ ನಡೆಸುವೆ ತೊದಲು ನುಡಿ.. ಬಾಳಿನಾ ಪುಸ್ತಕವು ಪಾಠಗಳಾ ಕಂತೆ, ಪ್ರತಿ ಪಾಠದ ಕೊನೆಯಲ್ಲಿ ಪ್ರಶ್ನೆಗಳಾ ಸಂತೆ.. ಕಲಿಸುವಾ ಸಾಲೊಳಗೇ ಉತ್ತರವೂ ಉಂಟು, ಕಲಿತು ಭೇದಿಸಲು ಪಡೆವೆ ಕೈತುಂಬಾ ಗಂಟು.. ಕನಸಲ್ಲೂ ಕಾಣು ಹೊನ್ನಂಥ ಬಾಳು, ನನಸಾಗದಿರಲಿ ಕೆಟ್ಟ ಕನಸುಗಳು.. ಒಂದು ಮಾತಂತೂ ನಾ ಹೇಳುವೆನು ಕೇಳು, ಎಲ್ಲರಿಗೂ ಸಿಗಲಿ ನಿನ್ನಂಥ ಮಗಳು..
----------------------------------
ನೋಂದಣಿ ಐಡಿ : KPFS2-7342