Submission 3440

ಅಸ್ಮಿತೆಯವಳು

ರಚನೆ : ಸುಶ್ಮಿತಾ ಹವಾಲ್ದಾರ್

----------------------------------

ಹೆಣ್ಣವಳು ಅವಳು ಅವಳಾಗಿಯೇ ಇರುವವಳು, ಜೀವನಕ್ಕೆ ಜೀವ ಜ್ಯೋತಿಯೇ ಇವಳು, ತನಗಾಗಿ ಅಲ್ಲದೆ ತನ್ನವರಿಗಾಗಿ ಸಂಸಾರದ ಭಾರ ಹೊತ್ತು ಸೊರಗುವವಳು, ನಿರಾಶ್ರಿತೆಯವಳು. ಆದರೂ ಪ್ರತಿಯೊಬ್ಬರ ಬಾಳಿಗೆ ಆಶ್ರಯದಾತೆಯವಳು, ಖುಷಿಯಲ್ಲಿ ನಕ್ಷತ್ರದಂತೆ ಮೀನುಗುವವಳು, ಕಷ್ಟಗಳ ಕಾರ್ಪಣ್ಯಕ್ಕೆ ಕರ್ಪೂರದಂತೆ ಕರಗುವವಳು , ಅವಳು ಅವಳಾಗಿಯೇ ಬದುಕುವವಳು ಸರಳ ಪ್ರೇಮಕ್ಕೂ, ಸ್ನೇಹಕ್ಕೂ ದಾರಿದೀಪ ಅವಳು, ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಗೈಯುತ್ತ ಸ್ವಾಭಿಮಾನವನ್ನ ಬಿಟ್ಟು ಬದುಕದವಳು, ಮಗುವಾಗಿ, ಮಗಳಾಗಿ, ಹೆಣ್ಣೆಂಬ ಕನ್ನಡಿಯಾಗಿ ಹಲವು ರೂಪವ ಹೊತ್ತು ಕೊನೆಗೆ ಪುಣ್ಯಕೋಟಿಯಂತೆ ತನ್ನ ಜೀವವನ್ನು ಒತ್ತೆಯಿಡುವವಳು, ಇವಳಿರದೆ ಒಂದು ಕ್ಷಣವನು ಊಹಿಸುವುದು ಕಷ್ಟ ಅದಕಾಗಿ ಅಸ್ಮಿತೆಯವಳು.

----------------------------------

ನೋಂದಣಿ ಐಡಿ : KPFS2-7340

69
Votes
475
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top