Submission 3386

ಬರಿದು ಫಕೀರ

ರಚನೆ : ಉದಯ್ ನಾಯಕ್

----------------------------------

ಅನಿಶ್ಚಿತ ಬದುಕಿನ ಅಡ್ನಾಡಿ ಅನುರಾಗಿ.. ಅರ್ಥ ಮಾಡಿಸುವ ಪದಗಳ ಗಂಟನ್ನು ಸಂಬಂಧಗಳ ಬಳ್ಳಿಯ ಕೈಯ್ಯೊಳಗೆ ಹಿಡಿಸಿಟ್ಟು ಮೈಮರೆತು ಹರಟುವೆನು.. ಅದ್ಯಾವ ವಿರಕ್ತಿಯ ಗಾಳಿ ಬೀಸುವಾಗ ಮೈ ತೆರೆದು ನಡುಗಿ ಮರಗುಟ್ಟುವೆನೋ.. ಹರಿವ ನದಿಯ ಪ್ರವಾಹಕೆ ಅಡ್ಡ ಸಿಕ್ಕವೆನು ಕೊಳೆಯಾದರೆ ತೊಳೆದೂ ಹೋದೇನು.. ನನ್ನವರೆದೆಯೊಳಗಣ ಸ್ಪಟಿಕ ಜಲವಾದರೆ ತುಸು ತಂಪಾದರೂ ಎರೆದೇನು... ಜಗದ ಕನ್ನಡಿಯ ಮುಂದೆ ಪದೇ ಪದೇ ನಿಂತು ತೋರಿಸಿ ಸಾಬೀತು ಪಡಿಸುವ ಔಚಿತ್ಯಗಳ ಮೂಲೆಗೆಸೆದ ಬರಿದು ಫಕೀರನು.

----------------------------------

ನೋಂದಣಿ ಐಡಿ : KPFS2-7304

0
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top