ದೈವ ಸಂಕಲ್ಪ
ರಚನೆ : ಹರೀಶ್ ಭಟ್ ಡಿ
----------------------------------
ಬದುಕೆಂಬ ಲತೆಗೆ ಜೊತೆಯಾದವಳು ನೀನು ಪ್ರೀತಿ ಎಂದರೇನೆಂದು ನಿನ್ನಿಂದಲೇ ಕಲಿತವನು ನಾನು ನಿನ್ನ ಸಂತೋಷದ ಅಲೆಯಲ್ಲಿ ಮೈಮರೆತವನು ನಾನು ನಿನ್ನ ಕೋಪವೆಂಬ ಜ್ವಾಲೆಗೆ ಮಂಜಿನಂತೆ ತಂಪೆರೆಯುವೆ ನಾನು ಜೀವನದ ಬಂಧನದಿಂದ ಪಾರಾಗಬೇಕು ಎಂದವನು ನಾನು ಪ್ರೀತಿಯೆಂಬ ಎರಡಕ್ಷರದಲಿ ಬಂಧಿಸಿ ಬಿಟ್ಟವಳು ನೀನು ನಾನು ನೀನು ಎಂಬುದನು ಒಂದಾಗಿಸಿದ ಈ ಜೀವನ ದೈವಸಂಕಲ್ಪವಲ್ಲದೆ ಮತ್ತಿನ್ನೇನು
----------------------------------
ನೋಂದಣಿ ಐಡಿ : KPFS2-7305