ಗೆಳತಿಗಾಗಿ
ರಚನೆ : ಶಶಿಕುಮಾರ್ ಹೆಚ್ ಎಸ್
----------------------------------
ನಿನ್ನನ್ನು ಕಂಡ ಕ್ಷಣ ನಾ ಬಯಸಿದೆ ನಿನ್ನ ಗೆಳೆತನ ತಿಳಿದೆ ನಿನ್ನಯ ಮುಗ್ಧ ಗುಣಗಳ ಹೇಳಬೇಕೆನಿಸಿದೆ ಈ ಮಾತುಗಳ ನಿನ್ನ ಆ ಮುಗುಳುನಗೆ ಪ್ರಿಯವೆನಿಸಿದೆ ನನಗೆ ಕೇಳಲು ಕಾತರಿಸಿರುವೆನು ನಿನ್ನ ಆ ಮಾತಿಗಳನು ನಿನ್ನ ಸುಂದರವಾದ ಕಣ್ಣುಗಳು ಹುಣ್ಣಿಮೆಯ ಚಂದ್ರನ ಎರಡು ಬಿಂಬಗಳು ಈ ಕವನವನ್ನು ಬರೆದಿರುವೆ ನಿನಗಾಗಿ ನನ್ನನು ಒಪ್ಪಿಕೊಳ್ಳುವೆಯಾ ನಿನ್ನ ಗೆಳತಿಯಾಗಿ.
----------------------------------
ನೋಂದಣಿ ಐಡಿ : KPFS2-7302