ನುಡಿಯ ನಡೆ!!
ರಚನೆ : ನಿತ್ಯಶ್ರೀ ಕೆ.ಎಸ್.
----------------------------------
ನುಡಿಯಾಗಲಿ ನಿನ್ನ ನಡೆಯ ಗುಡಿ ಭಾಷೆ ತೋರಲಿ ನಿನ್ನ ನಡತೆಯ ಅಭಿಲಾಷೆ ನೀ ನಡೆವ ರೀತಿ ಪರರಿಗೆ ಕಲಿಸಲಿ ನೀತಿ ನಿನ್ನ ಕೀರ್ತಿಯಿಂದ ಸಿಗಲಿ ಸರ್ವರಿಗೂ ಸ್ಫೂರ್ತಿ ಕನ್ನಡಿಯಂಥಾ ಈ ನಿನ್ನ ಮನಸ್ಸಿನ ನೆಮ್ಮದಿ ಆಗಲಿ ಇಮ್ಮಡಿ ಧಾರಾಳತೆಯೇ ನಿನ್ನ ಬಲ ನಿರಾಳತೆಯಲ್ಲೂ ಇರಲಿ ಅದೇ ಛಲ ನಿನ್ನ ಸಾಧನೆಗೆ ಎಂದಿಗೂ ಸಿಗಲಿ ಜಯ ನಿನ್ನಲ್ಲಿರುವ ತಾಳ್ಮೆ ಆಗಲಿ ಅಕ್ಷಯ ಸೋಲು ಗೆಲುವಿನ ಕುಸ್ತಿಯಲ್ಲೂ, ನಗುವಾಗಿರಲಿ ನಿನ್ನ ಆಸ್ತಿ ಬಿಟ್ಟುಬಿಡು ಇನ್ನು ನನ್ನಿಂದಾಗದು ಎನ್ನುವ ಭೀತಿ ನಿನ್ನದಾಗುವುದು ನೀ ಎಂದೆಂದಿಗೂ ಬಯಸಿದ ಪ್ರೀತಿ
----------------------------------
ನೋಂದಣಿ ಐಡಿ : KPFS2-7279