Submission 3344

ಜಿಪುಣನಲ್ಲ - ಅವನೇ ಅಪ್ಪ!!

ರಚನೆ : ನೆಂಪು ಕೃಷ್ಣ ಭಟ್ಟ

----------------------------------

ಮನೆಮಂದಿಗೆಲ್ಲ ಹೊಸಬಟ್ಟೆ ಕೊಡಿಸಿ ತಾನು ಅದೇ ಹಳೇ ಬಟ್ಟೆಯಲ್ಲಿರುವವ ಜಿಪುಣನಲ್ಲ - ಅವನೇ ಅಪ್ಪ! ತನ್ನಿಷ್ಟದ ವಸ್ತು ಕಂಡರೂ ಕಿಸೆಯಲ್ಲಿ ಕಾಂಚಾಣ ಇದ್ದರೂ ಕೊಳ್ಳದೇ ಮುಂದಡಿ ಇಡುವವ ಜಿಪುಣನಲ್ಲ - ಅವನೇ ಅಪ್ಪ! ಮಕ್ಕಳ ಕನಸುಗಳನ್ನು ನನಸು ಮಾಡಲು ತನ್ನ ಕನಸನ್ನೇ ಅಡ ಇಡುವವ ಜಿಪುಣನಲ್ಲ - ಅವನೇ ಅಪ್ಪ! ಕರುಳಕುಡಿಯನ್ನು ಧಾರೆಯೆರೆದು ಉಕ್ಕಿ ಬರುವ ಅಳುವ ನುಂಗಿ ಮರೆಯಲ್ಲಿ ಮರುಗುವವ ಜಿಪುಣನಲ್ಲ - ಅವನೇ ಅಪ್ಪ!

----------------------------------

ನೋಂದಣಿ ಐಡಿ : KPFS2-7278

0
Votes
115
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top