Submission 3342

ಆಸೆಯ ನಿನಾದದಲಿ

ರಚನೆ : ಸಂಜನಾ ಗಿರೀಶ್

----------------------------------

ಒಂದು ಸಣ್ಣ ಆಸೆ ನೂರು ಕನಸುಗಳ ಆರಂಭ ಪ್ರತಿ ಸೋಲಿನಲ್ಲಿ ಚಿಗುರಿತು ಎಡವಿದಾಗ ಏಳಲು ಪ್ರೇರಣೆಯಾಯಿತು ಖುಷಿಯನ್ನು ಕಣ್ಣೀರಾಗಿಸುವ ಇದರ ಮಾಯೆ ಅಪಾರ ಭಾವನೆಗಳ ಪ್ರತಿಬಿಂಬವಿದು ಇದರ ಮೂಲ ಅಮರ ಅಂಬೆಗಾಲಿಡುವ ಮಗುವಿಗೆ ನಡೆಯುವಾಸೆ, ಹಾರುವಾಸೆ ಓಡಾಟದ ಹೊಳೆಯಲ್ಲಿ ತೇಲುವ ಕಾಲುಗಳಿಗೆ ನೆಮ್ಮದಿಯಿಂದ ಕೂರುವಾಸೆ ಪ್ರತಿ ಮನದಾಸೆ ಒಂದು ಮೌನ ಗೀತೆ, ಅದರ ಸ್ವರ ಬೇರೆ, ಭಾವ ಒಂದೇ...

----------------------------------

ನೋಂದಣಿ ಐಡಿ : KPFS2-7276

260
Votes
1,008
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top