ಕೆಂಪು ಹೂವು
ರಚನೆ : ಸೌಮ್ಯ ಶ್ರೀ ನಿಕ್ಕಂ ಕೆ
----------------------------------
ಇದು ಅವಳ ಕೆಂಪು ಹೂವಿನ ದಿನ ಅವಳಲ್ಲಿ ಮಾಸಕ್ಕೊಮ್ಮೆ ಅರಳುವುದು ಕೆಂಪು ಹೂವು ಅದು ಬರಿ ಹೂವಲ್ಲ ಆಕೆ ಜೀವಂತಿಕೆಯ ಸಂಕೇತ ಅದುವೇ ಹೊಸ ಚೇತರಿಕೆ ಆಕೆಯೇ ಸೃಷ್ಟಿಗೆ ಮೂಲವಾಗುವ ಹೆಮ್ಮೆ ಅದೆಷ್ಟೇ ಬೇನೆ ತುಂಬಿದ್ದರು... ತಾನೇ ಪ್ರಕೃತಿಯಾಗುವ ಸಂಭ್ರಮದ ಪಥ ಆ ಹೂವಿನ ರಸವೆ ಹೊಸ ಹುಟ್ಟಿನ ಮೂಲ ಅವಳೊಳಗಿನ ಈ ಕೆಂಪು ಧಾರೆ ಜೀವ ನೀಡುವ ಅಮೃತಧಾರೆ ಅದು ಆಕೆಯಲ್ಲಿಯೇ ಮೌನವಾಗಿ ಹರಿಯುತ್ತದೆ ಗುಪ್ತಗಾಮಿನಿಯಂತೆ ನೆಲವನ್ನೆಲ್ಲ ಹಸಿರಾಗಿಸಿ
----------------------------------
ನೋಂದಣಿ ಐಡಿ : KPFS2-7274