ನನ್ನೊಳಗೆ ಉಳಿದವಳು
ರಚನೆ : ಮೃತ್ಯುಂಜಯ ಎಲಿ
----------------------------------
ಪ್ರೀತಿಸುವುದನ್ನು ಕಲಿಸಿದವಳು ಪ್ರೀತಿಸದೇ ಹೋದವಳು ಕನಸುಗಳ ಬಿತ್ತಿದವಳು ಕನಸಾಗಿ ಉಳಿದವಳು ಮನಸಿನ ಬಾಗಿಲ ತೆರೆದವಳು ಮನಸಿನೊಳಗೆ ಬಾರದೆ ಉಳಿದವಳು ನೆನಪಿನಂಗಳದಿ ಆಡಿದವಳು ನೆನಪಾಗಿಯೇ ಉಳಿದವಳು ಮನದ ಮನೆಯ ಮಡಿ ಮಾಡಿದವಳು ಮನದ ಮನೆಯೊಳಗೆ ಅಡಿಯಿಡದೆ ಹೋದವಳು ಯಾರವಳು? ನನ್ನೊಳಗೆ ಉಳಿದವಳು.
----------------------------------
ನೋಂದಣಿ ಐಡಿ : KPFS2-7273