ಎಂದೋ?
ರಚನೆ : ಉಮಾ. ಜಿ. ಎಸ್.
----------------------------------
ನರನ ಕಪಟ ಮಾತು ಕೊನೆಗಾಣುವುದೆಂದೋ? ನಿಕ್ಷ್ಕಂಟಕ ದಾರಿಯಲಿ ಪಯಣಿಸುವುದೆಂದೋ? ನಿರ್ಗತಿಕರ ಒಡಲ ನಿರಶನವು ನಿಗುವುದೆಂದೋ? ನಂಬುಗೆಯ ನಿರ್ಮಲ ಹೂ ಅರಳುವುದೆಂದೋ? ಮಾನವನ ಉದರದ ಇಂಗಳ ಆರುವುದೆಂದೋ? ಮನದ ಅಂಗಳದಲಿ ಪ್ರಭೆ ಮೂಡುವುದೆಂದೋ? ಮದದ ಮರದ ಬುಡ ಅಲುಗಾಡುವುದೆಂದೋ? ಮೋಸದಾರಿಗೆ ಮುಳ್ಳಬೇಲಿ ಬೀಳುವುದೆಂದೋ? ಗಿಡಗಳಲಿ ಹಸಿರಸಿರು ಉಸಿರಾಡುವುದೆಂದೋ? ಮರುಗುವ ಮೇದಿನಿಯು ಮಿನುಗುವುದೆಂದೋ? ಅಕಟಾ!! ಅಜ್ಞಾನವ ಇಳೆಯಯಿಂದ ಕಳೆ ದೇವ! ಮನಮನದ ಹಸಿ ಕಳೆಯ ಕೀಳು ಹೇ ಮಾದವ!
----------------------------------
ನೋಂದಣಿ ಐಡಿ : KPFS2-7250