ಬಿದಿರು ಮತ್ತವಳು ಗೊಂಬೆ
ರಚನೆ : ರವಿಕುಮಾರ್ ಬಿ
----------------------------------
ಅವಳಿಗೆ ಹಸಿರೆಂದರೆ ಉಸಿರು ಅರಸಿ ಹೋದಳು ಹುಡುಕುತ್ತಾ, ಆಗಷ್ಟೇ ಆಷಾಢ ಅಂತ್ಯವಾಗಿತ್ತು! ಜಿನುಗೊ ಝರಿ ಒಂದೆಡೆಯಾದರೆ ಜಡಿ ಹಿಡಿದ ಮಳೆರಾಯನ ಜೊತೆಗೆ, ಹೆಜ್ಜೆ ಊರಿ ಹೋದಳು ಅಚ್ಚಳಿಯದಂತೆ! ದೇಹ ಧಣಿದಿದ್ದರು ಸ್ವಲ್ಪ ಮನಸ್ಸು ಚಡಪಡಿಸುತ್ತಿತ್ತು, ನೋಡೋವ ಕೌತುಕವೋ ಸೇರುವ ಹಂಬಲವೋ! ಅಲ್ಲೆಲ್ಲೋ ದೂರದಲ್ಲಿ ಕೋಗಿಲೆಯ ಧನಿ ಆಗೀಗ ಬರುವ ಕೊಳಲಿನ ನಾದ, ವಾಲಾಡಿದವು ಕೇದಿಗೆ ಘಮ್ ಎನ್ನುವ ಸಂಪಿಗೆ! ನೋಡಲು ಅಕಾಶದೆತ್ತರ ಊರಾಚೆಯ ನಡುವೆ ಕಾಡಿಗೆ ಹತ್ತಿರ, ನಿನ್ನಷ್ಟು ಘಟ್ಟಿ ಯಾರಿರಲು ಸಾಧ್ಯ! ಬಿಗಿದಪ್ಪಿ ಬಂದವು ಕಿರಣ ಕಾಮನಬಿಲ್ಲಿಗೆ ತಾಕಿ ಏನು ಹೇಳದೆ, ಉಸಿರೊಳಗೆ ಬೆರತೆ ಸಪ್ತ ಸ್ವರವಾದೆ! ನಿನ್ನೊಳಗೆ ನಾ ಬಂಧಿಯಾದೆ ಕೃಷ್ಣಪ್ರಿಯ ನೀ ರಾಗವಾದೇ, ಬಿದಿರಿನ ಕೊಳಲು ಈ ನಿನ್ನ ರಾಧೆ!!!
----------------------------------
ನೋಂದಣಿ ಐಡಿ : KPFS2-7237