ರಾಧೆಯ ಮನದ ಕೃಷ್ಣ
ರಚನೆ : ಲಕ್ಷ್ಮೀ ಎಸ್
----------------------------------
ನಿನ್ನ ನೋಟದಲಿ ಹುಟ್ಟಿದೆ ನನ್ನ ಪ್ರೀತಿ, ನಿನ್ನ ನಗುವಿನಲಿ ಕರಗಿದೆ ನನ್ನ ಜೀವ, ಬಂಸಿಯ ನಾದ ಕೇಳಿದ ಕ್ಷಣವೆ, ಹೃದಯವೇ ನಿನ್ನದಾಯಿತು ಕೃಷ್ಣಾ.. ಯಮುನಾ ತೀರದ ಮಂಜಿನಲ್ಲಿ ನಿನ್ನನ್ನು ಹುಡುಕುತ್ತೇನೆ, ಪ್ರತಿ ಗಾಳಿಯಲಿ ನಿನ್ನ ಸ್ಪಂದನೆ ಕೇಳುತ್ತೇನೆ, ಪ್ರತಿ ಕ್ಷಣವೂ ನಿನ್ನನ್ನು ಧ್ಯಾನಿಸುತ್ತೇನೆ.. ನಿನ್ನ ಕಂಡ ಕ್ಷಣದಲ್ಲಿ ನಿನ್ನ ಪಾದಗಳಿಗೆರುಗುವೇನು ನಿನ್ನ ನಗು ನನಗೆ ವಚನವಾಯಿತು, ನಿನ್ನ ನಿಶ್ಯಬ್ದವೇ ನನ್ನಲ್ಲಿ ಭಕ್ತಿ ಹುಟ್ಟಿತು, ನಿನ್ನ ದೂರವೇ ನನ್ನಲ್ಲಿ ವೈರಾಗ್ಯ ಬರಿಸಿತು.. ಹೇ ಕೃಷ್ಣ ನಿನ್ನಿಲ್ಲದ ಕ್ಷಣವೇ ಖಾಲಿತನ, ನಿನ್ನ ನೆನಪೇ ನನ್ನ ಪರಮಾನಂದ, ನೀನು ನನ್ನೊಳಗಿದ್ದಷ್ಟು ಕಾಲ ನಾನೂ ನಿನ್ನ ರಾಧೆ ಸದಾಕಾಲ..
----------------------------------
ನೋಂದಣಿ ಐಡಿ : KPFS2-7236