Submission 3170

ಬಿಟ್ಯಾಕ ಹೊಂಟಿ

ರಚನೆ : ಮಲ್ಲಿಕಾರ್ಜುನ.ಶಿ.ಇಚ್ಚಂಗಿ

----------------------------------

ಬಿಟ್ಯಾಕ ಹೊಂಟಿ ನಿನ್ನ ರಂಟಿ ಕಟ್ಟಿದ್ದು ತಪ್ಪಾಯಿತು ಶಾಲೆಗೆ ಗಂಟಿ ವ್ಯವಸಾಯದ ಉದ್ಯೋಗಿ ನಿರುದ್ಯೋಗಿ ಉತ್ತಿ ಬಿತ್ತೋದ ಬಿಟ್ಟು ಹತ್ತಿ ಇಳಿಯೋಕೆ ಹೊಂಟಿ ಯಾತಕೋ ವಿದ್ಯೇ ಸೂರ್ಯನ ನಿದ್ದೆ ನೋಡಾಕ ನಗುವ ಚಂದಿರನಿಲ್ಲ ಇಲ್ಲಿ ತಾರೆಗಳೊಂದಿಗೆ ಸುತ್ತುತ್ತಿರುವ ಗಲ್ಲಿ ಗಲ್ಲಿ ಗುರಿ ಎಂದರೆ ಸರಕಾರಿ ಕೆಲಸ ಸುಂದರ ಕನ್ಯೆ ಇರಬೇಕು ಗಂಡಿಗೆ ಉತ್ತಿ ಬಿತ್ತಲಾರದ ಹೊಲ ಕೈ ಕೆಸರಾದರೆ ಬಾಯ್ ಬಚ್ಚಲು ನಗರದಾ ನಗಾರಿ ಹತ್ತಿರವೇ ಇರಬೇಕು ಹತ್ತಿ ಇಳಿಯಲು ನಿಲ್ದಾಣ ಕರಿಬೇವು ಕೊತ್ತಂಬರಿಗೂ ಬೇಕು ದ್ವಿಚಕ್ರ ವಾಹನ ವಿದ್ಯಾಪತಿಗಳು ವಿದೇಶ ವಾಸಿ ಸಂಬಳವೂ ಶ್ರೇಣೀಕೃತ ದೇಶಪ್ರೇಮವದು ಐತಿಹಾಸಿಕ ಉಗ್ರಾಣ ಜೀವನದ ಕುಲುಮೆಯಿದು ತಿಂದುಣ್ಣುವ ಸುಖದ ಹೆಣ.

----------------------------------

ನೋಂದಣಿ ಐಡಿ : KPFS2-7145

4
Votes
160
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top