Submission 3168

ನನ್ನಾಕಿ

ರಚನೆ : ನಾಗರಾಜ್ ಲಮಾನಿ

----------------------------------

ಇಕೀ ನನ್ನಾಕಿ ನೀ ಇನ್ನು ಸನ್ನಾಕಿ ಸೀರಿ ಉಟಕೊಂಡ್ರ ಗೂಂಬಿ ಹಂಗ ಕಾನಾಕಿ ಹುಡಗಿರ ಗುಂಪಿನ್ಯಾಗ ನಕ್ಷತ್ರದ್ದಂಗ ಹೂಳಿಯಾವಾಕಿ ಕೈ ಹಿಡಿದು ನಡಿ ಅಂದ್ರ ಹಲ್ಲ ಕಿಸಿಯಾಕಿ ಆಕಿ ನಕ್ಕರ ಚಂದ್ರನ ಮಿರಸಾಕಿ ನನ್ನ ಮನದ ಬೆಳದಿಂಗಳಾಕಿ ನಾ ಏನರ ಜಬರಿಸಿದ ಸಾದನ ಕೇರಿಗೆ ಓಡಾಕಿ ಭಾ ಅಂತ ಕರದ್ರ ಬೇಂದ್ರೆ ಅಜ್ಜನ ಮರಿಗೆ ನಿಲ್ಲಾಕಿ ರಮಸಾಕ ಹೂದ್ರ ಹಲ್ಲಿ ಹಂಗ ಲೊಚಗುಟ್ಟಾಕಿ ಇಕೀನಾ ನೋಡ್ರಿ ನಮ್ಮ ಮನಿ ದೀಪಾ ಬೆಳಗಾಕಿ ನನ್ನ ಹೆಗಲ ಮೇಲೆ ಮಲಕೊಂಡ್ರ... ಏನು ಹೇಳಬೇಡ ಸುಮ್ಮನಿರು ಅಂದಾಕಿ ನಾ ಕುಡಕೂಂಡ ಬಂದ್ರ ಹೂಡದ ಮತ್ತ ರಮಸಾಕಿ ಹೆಗಲ ಕೂಟ್ರ ಹಲ್ಲ ಮೂಡುವಂಗ ಕಡಿಯಾಕಿ ಏನ ಕೂಡಸಿದ್ರು ತವರಮನಿನಾ ಹೂಗಳಾಕಿ ಏನೇ ಆದ್ರೂ ನನ್ನ ಜೀವನದ ಮಹಾರಾಣಿ ಇಕೀ ನನ್ನಾಕಿ...

----------------------------------

ನೋಂದಣಿ ಐಡಿ : KPFS2-7143

6
Votes
156
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top