ನನ್ನವ್ವ
ರಚನೆ : ಚಂದ್ರಮ್ಮ ಪರಮೇಶಪ್ಪ ಫಕ್ಕೀರಣ್ಣನವರ್
----------------------------------
ಈ ಜಗಕ್ಕೆ ನನ್ನ ಪರಿಚಯಿಸಿದವಳು... ತನಗೆ ತಾಯಿತನ ನೀಡಿದ ನನ್ನನ್ನು ತನ್ನ ತಾಯಿ ಎಂದವಳು... ತನ್ನೆಲ್ಲಾ ನೋವುಗಳನ್ನು ತನ್ನ ಉಡಿಯಲ್ಲಿ ಬಚ್ಚಿಟ್ಟವಳು... ನನ್ನೆಲ್ಲಾ ಗೆಲುವುಗಳನ್ನು ಆಗಸದೆತ್ತರಕ್ಕೆ ಒಯ್ದವಳು... ಅಪ್ಪನಂತೆ ಮನೆಯ ಮನಸ್ಸುಗಳನ್ನ ಕಾಪಾಡಿದವಳು... ನಮಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಿದವಳು... ಮನೆಯ ಮೊದಲ ಗುರುವಾಗಿ ನಿಂತವಳು... ನನ್ನೆಲ್ಲಾ ಭರವಸೆಗಳನ್ನ ಮೀರಿದವಳೇ... ನನ್ನವ್ವ..
----------------------------------
ನೋಂದಣಿ ಐಡಿ : KPFS2-7049