ನಿಸ್ವಾರ್ಥ ಜೀವಿ
ರಚನೆ : ಮಾಲಿಂಗರಾಯ
----------------------------------
ವಿದ್ಯೆ ಕಲಿಸಿದ ವಿದ್ವಾಂಸನಂತೆ.. ತಿದ್ದಿ ಬುದ್ಧಿ ಹೇಳಿದ ಬುದ್ದಿವಂತನಂತೆ.. ಶಾಂತಿಯಲ್ಲಿ ಗಾಂಧಿಯಂತೆ.. ಶ್ರದ್ದೆಯಲ್ಲಿ ಬುದ್ದನಂತೆ.. ಕರುಣೆಯಲ್ಲಿ ಕರ್ಣನಂತೆ.. ಅಖಂಡದಷ್ಟು ಹೃದಯ ಹೊಂದಿರುವ ನನ್ನ ಎಲ್ಲಾ ಮುದ್ದಿನ ಗುರುಗಳಂತೆ.. ನೀನು ಹೇಳಿಕೊಟ್ಟಂತೆ ನಾನಾಗುವೆ.. ಅನ್ನ ನೀಡುವ ರೈತನಾಗುವೆ.. ಆರೋಗ್ಯ ನೀಡುವ ವೈದ್ಯನಾಗುವೆ.. ದೇಶ ಕಾಯುವ ಸೈನಿಕನಾಗುವೆ.. ವಿದ್ಯೆ ನೀಡುವ ಗುರುವಾಗುವೆ.. ಏನಾದರೂ ಆಗುವೆ, ಮೊದಲು ದೇಶಕ್ಕೆ ಉತ್ತಮ ಪ್ರಜೆಯಾಗುವೆ.. ಏನನ್ನು ಬಯಸದೆ ಇಷ್ಟೆಲ್ಲಾ ಮಾಡಿದ ನಿಮಗೆ ಶಿಕ್ಷಕ ಎನ್ನುವ ಒಂದು ಪದ ಮಾತ್ರವೇ ಸಾಕೆ? ಅಥವಾ ದೇವರು ಎಂಬ ಇನ್ನೊಂದು ನಾಮ ಕರೆಯಬೇಕೆ?
----------------------------------
ನೋಂದಣಿ ಐಡಿ : KPFS2-7048