ಕಂಬನಿಯೊಂದು ಜಾರಿದೆ
ರಚನೆ : ಸುಲಕ್ಷಣಾ ಕೆ
----------------------------------
ಕಂಬನಿಯೊಂದು ಜಾರಿದೆ ನನ್ನ ಸಮ್ಮತಿ ಇಲ್ಲದೆ.. ನನ್ನೆದುರು ನೀ ಬಾರದೆ ಮನರಂಗದಿ ಗದ್ದಲ ಎದ್ದಿದೆ.. ಬಚ್ಚಿಡಲು ಭಾವನೆಗಳ ಹೃದಯ ಮೃದಂಗದಿ ತಳಮಳ! ಕಂಗಳಾಗಲು ತುಂಬಿದ ಕೊಳ ಅರಿಯದಾದೆ ಈ ಬಂಧದ ಆಳ ಮನದ ಮಾತಿನ ಹುಚ್ಚಾಟಕೆ ನೆಮ್ಮದಿಯು ಮರುಭೂಮಿಯ ಮರೀಚಿಕೆ ಮತ್ತೆ ಪುಟಿದೇಳುವ ಬಯಕೆ ನೆಲಕಚ್ಚಿದೆ ಭಾವನೆಗಳ ಭಾರಕೆ
----------------------------------
ನೋಂದಣಿ ಐಡಿ : KPFS2-7050