ತ್ಯಾಗಮಯಿ ನನ್ನ ಗೆಳತಿ
ರಚನೆ : ಪ್ರಸನ್ನಕುಮಾರ್ ಕೆ
----------------------------------
ಅವಳು ಕಲ್ಪನೆಗೂ ಮೀರಿದವಳು ಊಹೆಗೂ ನಿಲುಕದ ತ್ಯಾಗಮಯಿ ಕನಸು ಹೊತ್ತ ಜೀವಕ್ಕೆ ನನಸು ಬರಿ ಕನಸು ಆ ಕನಸು ಅನಲದೊಳಗೆ ಸಿಕ್ಕಿ ಬೂದಿಯಾಯಿತು ನಲ್ಲನ ಪಡೆವ ಅವಕಾಶದಲಿ ಮನೆಯ ಮಾತಿಗೆ ಮರುನುಡಿಯದೆ ಮೌನವಾದಳು ತನ್ನ ಮನದಿಂದಲ್ಲ ತಂದೆ ತಾಯಿಯ ಭಾವದಿಂದ ಅವನ ಮನಕೆ ಅವಳ ಮನಸು ದೂರ ಮನದಿಚ್ಛೇಯಿಲ್ಲದಿದ್ದರೂ ಮನಗಳು ಸೇರಬೇಕು ಕಾರಣ ಅವಳು ಮನೆಯ ಮರ್ಯಾದೆಗಂಜಿದವಳು.
----------------------------------
ನೋಂದಣಿ ಐಡಿ : KPFS2-7028