Submission 3028

ಅವ್ವ ನಿನ್ನ ಏನೆಂದು ಹೋಲಿಸಲಿ?

ರಚನೆ : ಬಸಮ್ಮ ಎಸ್ ಬ್ಯಾಳಿ

----------------------------------

ಅವ್ವ ನಿನ್ನ ಹೂಗಳಿಗೆ ಹೋಲಿಸಲೇ? ಬೇಡಾ, ನಿನ್ನ ಬಾಡುವ ಹೂಗಳಿಗೆ ಹೋಲಿಸದೇ ಸವಿದರೂ ಬೇಕೆನ್ನುವ ಮಕರಂದಕ್ಕೆ ಹೋಲಿಸುವೆ ಯವ್ವ ನಿನ್ನ ಮರ-ಗಿಡಗಳಿಗೆ ಹೋಲಿಸಲೇ? ಬೇಡಾ, ನಿನ್ನ ಒಣಗುವ ಮರ-ಗಿಡಗಳಿಗೆ ಹೋಲಿಸದೇ ಹಸಿರು ಪ್ರಜ್ವಲಿಸುವ ನಿತ್ಯಹರಿದ್ವರ್ಣಕ್ಕೆ ಹೋಲಿಸುವೆ ಜನ್ಮದಾತೆ ನಿನ್ನ ದೇವರ ಮೂರ್ತಿಗೆ ಹೋಲಿಸಲೇ? ಬೇಡಾ, ಜೀವವೇ ಇಲ್ಲದ ಮೂರ್ತಿಗೆ ನಿನ್ನ ಹೋಲಿಸದೇ ಎಂದಿಗೂ ಮರಣವಿಲ್ಲದ ಚಿರಂಜೀವಿಗೆ ಹೋಲಿಸುವೆ ಹಡೆದವ್ವ ನಿನ್ನ ಸುಖ-ಶಾಂತಿಗೆ ಹೋಲಿಸಲೇ? ಬೇಡಾ, ನಿನ್ನ ಕೊನೆಗೊಳ್ಳುವ ಸುಖ-ಶಾಂತಿಗೆ ಹೋಲಿಸದೇ ನಿನ್ನ ಮಡಿಲನ್ನು ಸ್ವರ್ಗಕ್ಕೆ ಹೋಲಿಸುವೆ

----------------------------------

ನೋಂದಣಿ ಐಡಿ : KPFS2-7029

1
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top