Submission 2950

ಕಾಯುವ ಇಳೆ

ರಚನೆ : ವಿನಿ ನಾಯಕರಹಳ್ಳಿ

----------------------------------

ಚಂದಿರನ ಕಾಂತಿಯ ಕಣ್ಣಿಗೆ ರಾತ್ರಿಯ ಕತ್ತಲೆಯ ಕಾಡಿಗೆ ಕುಂಕುಮದ ಬಿಂದಿ ಹಣೆಗೆ ಹರಿಶಿಣದ ದಾರ ಮುಂಗೈಗೆ ಕೈಗೆ ತೊಟ್ಟಿರುವಳು ನಾಲ್ಕು ಬಳೆ ಸೊಂಟಕೆ ಕಟ್ಟಿದ ಡಾಬು ಮೂರೆಳೆ ಕೆಂಪುಸೀರೆ ಜೋಡಿನವಿಲು ಹಸಿರೆಲೆ ಬಂಗಾರದ ಹೂವಿನ ಕೊರಳಮಾಲೆ ಮಂಜಾಗಿ ಭುವಿಗೆ ಜಾರಿ ಬಂದವಳೆ ತಂಪಾದ ತಾಯಿಯ ಹೃದಯದವಳೆ ಕುಸುಮದ ಮೇಲೆ ಕುಳಿತು ಹೊಳೆಯುವವಳೆ ಉದಯ ರವಿಯ ನೋಡಿ ನಗುವವಳೆ ನಾ ನಿನಗಾಗಿ ಕಾಯುವ ಇಳೆ ನೀ ಸುರಿಸು ಮಮಕಾರದ ಮಳೆ

----------------------------------

ನೋಂದಣಿ ಐಡಿ : KPFS2-6981

444
Votes
2,106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top