ಕಣ್ಮರೆಯಾದ ಕಾರಣ
ರಚನೆ : ರೂಪಾ ಆಗೇರ
----------------------------------
ಮನದ ಬೀದಿಯಲ್ಲಿ ನೆನಪುಗಳದೇ ದಾಳಿ... ಬಿಟ್ಟು ಹೋಗದಿಹ ನೋವುಗಳದೇ ಹಾವಳಿ... ಕಾರಣವೇ ಹೇಳದೆ ದೂರಾಗುವ ಸಂಬಂಧಗಳ ನಡುವೆ... ಕಂಡಿದ್ದು, ಕಾಣದ್ದು ಎಲ್ಲವೂ ಮಾಯವೇ... ಸಮಯವೇ ತಿಳಿಸಿ ಬಿಡಲಿ ಎಲ್ಲವನ್ನೂ... ಅರಿತೋ ಅರಿಯದೆಯೋ ಮರೆಯಾಗಿಸಲಿ ಸಖ್ಯವನ್ನೂ... ತಪ್ಪು ಸರಿಗಳ ಜಿಜ್ಞಾಸೆಯಲ್ಲಿಯೇ ತಲೆ ಭಾರ... ಇಳಿಸಿ ಬಿಡಲು ಆಗುವುದಿಲ್ಲ ಮನದಲ್ಲಿದ್ದರೆ ಖಾರ... ಆಗದು ಎಂದರೆ ಎಲ್ಲವೂ ಅಸಾಧ್ಯ... ಮನ ಸಾಕ್ಷಿ ಮೆಚ್ಚದ್ದೂ ಹೇಗೆ ಮಾಡಲು ಸಾಧ್ಯ... ಗತಿ - ಸಂಗತಿಗಳ ನಡುವೆ ಗತಕಾಲದ ಚಿಂತನೆ... ಮಾಡದೆ ಇರಲಿ ಮನಸ್ಸಿನ ಪುಟದಲ್ಲಿ ಘರ್ಷಣೆ... ಗೊತ್ತಿದ್ದೂ ಗೊತ್ತಿಲ್ಲದೆ ಆಗುವುದೇ ಆದರೂ ಆಕಸ್ಮಿಕ... ಮಾಡಿ ಕೊಳ್ಳುವುದು ಬೇಡವೇ ಬೇಡ ಅದನ್ನೇ ನಿತ್ಯದ ಕಾಯಕ...
----------------------------------
ನೋಂದಣಿ ಐಡಿ : KPFS2-6980