ಅವ್ವನ ಕರಳು
ರಚನೆ : ಸಿದ್ಧಾರೂಡ್ ಉಳ್ಳಾಗಡ್ಡಿ
----------------------------------
ಅಕ್ಷರವ ಗೊತ್ತಿಲ್ಲದ ಬಡವಿ ನನ್ನವ್ವ, ಅವಳಕ್ಕರೆಗೆ ಮಿತಿಯಿಲ್ಲದ ಸಿರಿವಂತೆ ನನ್ನವ್ವ. ತನಗಾದ ಹಸಿವೆ ಮರೆಯುವಷ್ಟು ಮರಳು ನನ್ನವ್ವ, ತನ್ನವರಿಗಾದ ನೋವೇ ಮರೆಸುವಷ್ಟು ಚುರುಕು ನನ್ನವ್ವ. ಯಾವ ಟೇಕ್ನಲಾಜಿಯು ಗೊತ್ತಿಲ್ಲದ ನನ್ನವ್ವ, ಗೊತ್ತಿರುವ ಕಾಳಜಿ ಹಂಚುವ ಅಡ್ಮಿನು ನನ್ನವ್ವ. ಕರುಳ ಬಳ್ಳಿಯು ಅರಿಯುವುದು ಕಂದನ ನೋವ. ನೋವು ಆದ ಘಳಿಗೆ ಬರುವುದು ಬಾಯಲಿ ಅವ್ವ. ನನ್ನ ಬಳಿಗೆ ಏನಿಲ್ಲ ನಿನಗೆ ಸಮನಾದುದು ತೀರಿಸಲು ಋಣವ.
----------------------------------
ನೋಂದಣಿ ಐಡಿ : KPFS2-6930