ಬೇಕಾಗಿದೆ!
ರಚನೆ : ರವೀಶ. ಕೆ.
----------------------------------
ಮಾರುವ ಮನಸಾಗಿದೆ ನನಗೂ ಕೊಳ್ಳುವ ಸಿರಿವಂತರು ಇಹರೇನು? ನನ್ನೆಲ್ಲಾ ನೊಂದ ನೋವನು! ಜೀತಕ್ಕೊ ಸ್ವಂತಕ್ಕೊ! ಯಾವುದಾದರೇನು? ಖರೀದಿಸುವ ಕನಸುಂಟು ನನಗೂ ಮಾರುವ ಬಡವರು ಇಹರೇನು? ನನಗು ಚೂರು ನೆಮ್ಮದಿಯನು! ಭೋಗ್ಯಕ್ಕೊ ಬಾಡಿಗೆಗೊ! ಏನಾದರೇನು? ಬೇಕಾಗಿದೆ ಕೊಂಚ ನಗೆಯೊಂದು ಮೌನವಂಟಿದ ತುಟಿಗೆ! ಬೇಕೆನಿಸಿದೆ ಸಿಹಿಯ ನೆನಪೊಂದು ನೆನ್ನೆ ಮರೆತ ಇಂದಿಗೆ...! ನನ್ನೇ ಮರೆತ ನನಗೆ...!
----------------------------------
ನೋಂದಣಿ ಐಡಿ : KPFS2-6929