Submission 2870

ಹೇ ಪುಸ್ತಕವೇ

ರಚನೆ : ನಂದನ ಕೆ.ಎನ್

----------------------------------

ಯಾರು ನೀ ನನಗೆ, ನನ್ನ ಮನದ ಗರ್ಭದಲ್ಲಿ ಬೀಜ ಬಿತ್ತಿದ ಕುತೂಹಲದ ಜನನಿಯೋ ನೀ? ಪ್ರೀತಿಯ ಸಿಹಿಗಾಳಿಯೊ, ದುಃಖವಾದಾಗ ನೆರಳೊ, ಸಂತೋಷದ ಕಿರಣವೋ ನೀ? ತಿಳಿಯದೆ ಬಂದು ನಿನ್ನ ಪುಟಗಳಲಿ ನನ್ನ ಆತ್ಮವನ್ನೇ ನೆಟ್ಟೆಯೋ ನೀ? ಹೇ ಪುಸ್ತಕವೇ, ನಿನ್ನ ರೂಪ ಏನು? ನೀ ಅವಳೋ? ಅವನೋ? ಅಥವಾ ಕಾಲದ ಕಣ್ಣಿನ ಚಿತ್ರವೋ ನೀ? ಒಂಟಿಯ ಹಾದಿಯಲಿ ಹೆಜ್ಜೆಗೂಡೋ ಗೆಳತಿಯಂತೆ, ಮರೆತ ಕ್ಷಣದಲ್ಲಿ ನೆನಪಾಗಿ ಬರುವ ನಿಸ್ವನದಂತೆ, ಯಾವ ರೂಪದಲಿ ನೀನು, ಯಾವ ನೆನಪಿನಲಿ ನೀನು — ಹೇ ಪುಸ್ತಕವೇ, ಯಾರು ನೀ ನನಗೇ..?

----------------------------------

ನೋಂದಣಿ ಐಡಿ : KPFS2-6924

83
Votes
465
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top