ಅವನಿಗಾಗಿ ಕಾದವಳು
ರಚನೆ : ಕೀರ್ತನಾ ಕೆ
----------------------------------
ಅವನ ಪ್ರೀತಿಯ ಸಮುದ್ರದಲ್ಲಿ ಮುಳುಗಿದವಳು ನಾನು.. ನನ್ನ ಪ್ರೀತಿ ಬೇಡವೆಂದು ತೊರೆದು ಹೋದವನು ಅವನು.. ನನ್ನೆಲ್ಲ ಕಷ್ಟಗಳನ್ನು ಮರೆತು ಅವನಿಗಾಗಿ ನಕ್ಕವಳು ನಾನು.. ಅ ನಗುವನ್ನು ಮರೆಸುವ ನೋವನ್ನು ಕೊಟ್ಟವನು ಅವನು.. ಎಟುಕದ ತಾರೆಯಾದನೂ ಅವನು .. ಸಿಗದವನಿಗೆ ಕಣ್ಣೀರಧಾರೆ ಹರಿಸಿದೆನು ನಾನು.. ಮರಳಿ ಬಾರದವನು ಅವನು.. ಮರುಜನ್ಮದಲ್ಲದರೂ ಬರುವೆನೆಂದು ಕಾಯುತಿರುವವಳು ನಾನು...
----------------------------------
ನೋಂದಣಿ ಐಡಿ : KPFS2-6926