Submission 2864

ಚೆಂಡಿನ ದಾರಿ

ರಚನೆ : ಸಂತೋಷ ನೆಲ್ಲಿಕಾರು

----------------------------------

ಕನಸಿನ ರಸ್ತೆಯಲ್ಲಿ ಬಂಡಿ ಹೊರಟಿದೆ, ಸಾಗೋದಾರಿ ಪೂರ್ಣ ಗುಂಡಿಯಾಗಿದೆ, ಮನಸಿನಲ್ಲಿ ಗಟ್ಟಿ ಟಾರು ಹಾಕದೆ ಪ್ರೀತಿಯ ದಾರಿ ಬರೀ ಧೂಳಾಗಿದೆ | ಮನೋರಿಪೇರಿಯಲಿ ಪ್ರೇಮಸಲ್ಲಾಪ ಲಗೋರಿಯಾಗಿದೆ, ಅಪ್ಪಿಕೊಳ್ಳೋಣವೆಂದರೆ ಖೋ ಗೋ ಎನ್ನುವಳೇ, ಸಮರಸಗೊಳ್ಳೋಣವೆಂದರೆ ಪ್ರೇಮದಾಟ ಕಬ್ಬಡಿಯಾಗಿದೆ, ಒಟ್ಟಾಗೋಣ ಎಂದರೆ ಅವಳಿಗೆ ನಾ ಕಾಲ್ಚೆಂಡಾಗಿಹೆ | ಜೀವನದ ಬಾನ್ಚೆಂಡಿನಲ್ಲಿ ಚಿಮ್ಮಿಸುತ್ತಿಹಳು, ನೆಲಕೆ ಬೀಳದಂತೆ ಕುಣಿಸುತ್ತಿಹಳು, ಜೀವನ ನನಗೆ ಹುಡುಕಾಟ - ಅವಳಿಗೆ ಹುಡುಗಾಟ |

----------------------------------

ನೋಂದಣಿ ಐಡಿ : KPFS2-6918

143
Votes
882
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top