ಕಾಣದವಳು ಕಂಡಂತೆ
ರಚನೆ : ಅಭಿಷೇಕ್ ನಂಜಪ್ಪ
----------------------------------
ನಿನ್ ಮನ್ಸ ಪೂರ್ತಿ ಏನೇನೈತಿ, ಬಿಡ್ಸಿ ಹೇಳೆ ಒಂದು ಸರ್ತಿ ಹಗಲಲ್ ಕಾಣೋ ಕನ್ಸ ಬಿಟ್ಟು, ಕೊಂಚ ಮಾಡಿ ನೋಡೆ ಚಿಂತಿ ಅಂಗೈನಾಗೆ ಮುಳ್ ಇಟ್ಕೊಂಡು ಮುಟ್ಟಿದ್ದೆಲ್ಲಾ ನೋವು ಅಂತಿ ಕುಣಿಯಕ್ ಆಗ್ದೆ ನೆಲ ನೋಡಿ ಡೊಂಕು ಅಂದೆ ಪಾತರಗಿತ್ತಿ ಅಳತೆ ಮೀರಿದ್ ಯೋಚ್ನೆ ಆದ್ರೆ ಆಪತ್ ನಿಂಗೆ ಬಿನ್ನಾಣಗಿತ್ತಿ ಮುಂಗಾರ್ ಮಳೆ ಚಂದ ಆದ್ರೆ, ಮಿಂಚು ಸಿಡಿಲು ಯಾಕ ಮರ್ತಿ ಖುಷಿ ಕಾಣೋ ಹೊತ್ತನ್ ಮರೆಸಿ ದುಃಖಕೊಂದು ಬಾವಿ ತೋಡ್ತಿ ಇಲ್ಲ ಅಂದ್ರು ಕೆಣಕಿ ಕೆಣಕಿ ಬ್ಯಾಸರಕೊಂದು ಕಾರಣ ಕೊಡ್ತಿ ನಿನ್ ಗುರಿ ಸರಿ, ಆಯ್ದ ದಾರಿ ಯೋಚ್ನೆ ಮಾಡು ಕಣ್ಣ ಎತ್ತಿ ಕಷ್ಟ ನೂರು, ಇಲ್ದೋರ್ ಯಾರು, ನೀರಲ್ ಹಾಕು ಕಣ್ಣೀರ್ ಬುತ್ತಿ ಪ್ರೀತಿ ಹಂಚಿ ಸುಖ ಕಾಣು, ನೋವ್ ಇದ್ದೆ ಐತೆ ಜೀವ್ನ ಪೂರ್ತಿ ಆಡಿದ್ ಮಾತು ಒರಟು ಆದ್ರೆ ಅದ್ರಲ್ ಕೊಂಚ ಅರ್ಥ ಐತಿ ಹೆಣ್ಣಿನ್ ಮನ್ಸು ಬಲ್ಲೋರ್ಯಾರು ಸತ್ಯನಾ ಅದು ನೀ ಏನಂತಿ ಆದ್ರೂ ನಿನ್ನ ಅಂತರ ಕಾಣೋ ಶಕ್ತಿ ಇರೋನ್ ನಾನೊಬ್ನೆ ವ್ಯಕ್ತಿ ನಿನ್ ಖುಷಿ ಬಯಸೋ ಹೈದ ನಾನು ಒಳಗಣ್ಣಲ್ಲು ನೀನೇ ಕಾಣ್ತಿ
----------------------------------
ನೋಂದಣಿ ಐಡಿ : KPFS2-6917