Submission 2852

ಮುಗ್ಧ ಮನಸು

ರಚನೆ : ಮುಕ್ತಾ ಪ್ರವೀಣ

----------------------------------

ಹೇ ಮನಸ್ಸಿ ನೀನೆಷ್ಟು ಮುಗ್ಧ, ಹಳೇದನ್ನು ಮರೆತು ಹೊಸ ಯೋಚನೆ ಮಾಡುತ್ತಿರುವಾಗ ಮತ್ತೆ ಹಳೆಯ ನೆನಪುಗಳನ್ನು ಮೆಲಕು ಹಾಕುವ ಮನಸಿ, ನೀನೆಷ್ಟು ಮುಗ್ಧ. ಎಷ್ಟೋ ಅವಮಾನಗಳನ್ನ ಅನುಭವಿಸಿ ಮತ್ತೆ ಅದನ್ನ ಮರೆತು ಮುಂದೆ ಹೋಗಬೇಕು ಎನ್ನುವಾಗ ಆ ಅವಮಾನಗಳನ್ನು ಪದೇಪದೇ ನೆನಪಿಸಿಕೊಳ್ಳುವ ಮನಸೇ, ನೀನೆಷ್ಟು ಮುಗ್ಧ. ಮತ್ತೆ ಬಣ್ಣದ ಮಾತಿಗೆ ಮರುಳಾಗಬಾರದು ಮೋಸ ಹೋಗಬಾರದು ಎನ್ನುವಷ್ಟರಲ್ಲಿ ಮತ್ತೆ ಎಲ್ಲವನ್ನು ಮರೆತು ಮನಸ್ಸೋಲುವ ಮನಸೆ, ನೀನೆಷ್ಟು ಮುಗ್ಧ. ಎಷ್ಟೋ ಗಾಯಗಳು ಮನಸ್ಸಿನಲ್ಲಿ ಇದ್ದರು ಮತ್ತೆ ಅದರ ಅರಿವೇ ಇಲ್ಲದೆ ನೋವನ್ನ ಮತ್ತೆ ಬರಮಾಡಿಕೊಳ್ಳುವ ಮನಸೇ, ನೀನೆಷ್ಟು ಮುಗ್ಧ. ಇಷ್ಟೆಲ್ಲಾ ಆದರೂ ಮತ್ತೆ ನಿರೀಕ್ಷೆ ಮಾಡುವ ಮನಸೇ, ನೀನೆಷ್ಟು ಮುಗ್ಧ. ಭಾವನೆಗಳೇ ಇಲ್ಲದವರಿಗೆ ಮತ್ತೆ ಮತ್ತೆ ಕಾಳಜಿ ಪ್ರೀತಿ ತೋರಿಸುವ ಮನಸಿ, ನೀವೆಷ್ಟು ಮುಗ್ಧ.

----------------------------------

ನೋಂದಣಿ ಐಡಿ : KPFS2-6908

112
Votes
825
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top