ಜನನಿ
ರಚನೆ : ಕಿರಣ್ ಹಕಾರಿ
----------------------------------
ಮಗುವಿಗಾಗಿ ಸೃಷ್ಠಿಸಿದಳು ಗರ್ಭಗುಡಿ ಜನಿಸಿದಾಗ ಕತ್ತರಿಸಿತೆ ಕರುಳಕುಡಿ ಹಡೆಯುವಾಗ ಕಠಿಣಕರ ನೋವು ಅನುಭವಿಸಿತ್ತು ಈ ಜೀವಾ ಮಗುವನ್ನು ನೋಡಿದ ತಕ್ಷಣ ಮರೆಯಿತೇ ನೋವಾ ಎದೆಹಾಲೆಂಬ ಅಮೃತವ ಉಣಿಸಿದಳು ಮಗುವನ್ನು ರೋಗದಿಂದ ರಕ್ಷಿಸಿದಳು ಹಾಸಿದಳು ಮಡಿಲೆಂಬ ರತ್ನಗಂಬಳಿ ನೀಡಿದಳು ಪ್ರೀತಿ, ಮಮತೆಯ ಬಳ್ಳಿ ಲಾಲಿಹಾಡು ಹಾಡಿ ಆದಳು ಸಂಗೀತಗಾರ್ತಿ ಮಗುವಿಗೆ ದೊರೆತ ನಡೆದಾಡುವ ದೈವ ಮೂರ್ತಿ ಮಗುವು ಮಾಡುವ ತಪ್ಪುಗಳಿಗೆ ಕ್ಷಮಿಸಿ, ಅರ್ಥೈಸಿ ನೀಡಿದಳು ಅಪ್ಪುಗೆ "ತಾಯಿ" ಇಲ್ಲದ ಜಗವೆಲ್ಲ ಬಣ-ಬಣ ಸಾವಿರ ಜನ್ಮ ಕಳೆದರೂ ತೀರಿಸಲಾಗದು ತಾಯಿಯ ಋಣ...
----------------------------------
ನೋಂದಣಿ ಐಡಿ : KPFS2-6907