Submission 2848

ಸಿಂಧೂರದ ಸಿಟ್ಟು

ರಚನೆ : ಇಸ್ಮಾಯಿಲ್ ಮುಲ್ಲಾ

----------------------------------

ರುಧಿರ ದಾರೆಯಲಿ ರಕ್ತ ಕುದಿಯುತಿದೆ ನಡೆಯಲಿ ಶತ್ರು ಸಂಹಾರ ಪ್ರತೀಕಾರದ ಮಾರ್ದನಿಯು ಮೊಳಗುತಿದೆ ಘರ್ಜಿಸಲಿ ಸೈನಿಕನ ಶಸ್ತ್ರ ಪ್ರಹಾರ ಹೊಂಚಕನ ಸಂಚಿಗೆ ಪ್ರತ್ಯುತ್ತರವಾಗಲಿ ಮರಣಮೃದಂಗವು ಎಲ್ಲೆಡೆ ಕೇಳಲಿ ಎದುರಾಳಿಯ ಎದೆಯು ಇಬ್ಬಗೆಯಾಗಲಿ ಯೋಧನ ಹೃದಯ ಹೂಂಕರಿಸಿ ನಡೆಯಲಿ ಸಿಂಧೂರದ ಸಿಟ್ಟಿಗೆ ವೈರಿಯೇ ನಿರ್ನಾಮವಾಗಲಿ ಗುಂಡಿನ ಸದ್ದಿಗೆ ಹಗೆಗಾರನೇ ಅಗ್ನಿಗಾಹುತಿಯಾಗಲಿ ಕೆನ್ನೀರು ಹರಿದು ಬೆಂಕಿಯ ಕೆನ್ನಾಲಿಗೆ ಆವರಿಸಲಿ ಭಾರತಾಂಬೆಯ ಕೀರ್ತಿ ಜಗದೆಡೆ ಬೆಳಗಲಿ

----------------------------------

ನೋಂದಣಿ ಐಡಿ : KPFS2-6903

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top