Submission 2716

ಕನ್ನಡವೆನ್ನುಡಿ

ರಚನೆ : ಬಿ ಟಿ ಮಂಜುನಾಥ

----------------------------------

ಕನ್ನಡವೆನ್ನಿ ನನ್ನುಡಿಯೆನ್ನಿ ಕನ್ನಡ ಕಂಪನು ಹರಡುವ ಬನ್ನಿ ನನ್ನುಡಿ ನಿನ್ನುಡಿ ಚೆನ್ನುಡಿ ಕನ್ನಡ ಶ್ರೀನುಡಿ ನಲ್ನುಡಿ ಕನ್ನಡಿ ಕನ್ನಡ ಕನ್ನಡ ಕವಿಗಳು ರಚಿಸಿದ ಕನ್ನಡ ರಾಗದಿ ಎಲ್ಲರೂ ಹಾಡಿದ ಕನ್ನಡ ಹಂಪೆಯ ಕಲ್ಲಲಿ ಸರಿಗಮ ಕನ್ನಡ ಹಲ್ಮಿಡಿ ಶಾಸನ ಬರಹದಿ ಕನ್ನಡ ಜೋಗದ ಸಿರಿಯಲಿ ಹರಿಯಲಿ ಕನ್ನಡ ಮೇರು ಸಹ್ಯಾದ್ರಿಯ ಹಸಿರದು ಕನ್ನಡ ಬಯಲಿನ ಭುವಿಗೆ ಸ್ವರ್ಗವು ಕನ್ನಡ ರಾಜರ ಆಸ್ಥಾನ ರಾಜನು ಕನ್ನಡ ಭುವನೇಶ್ವರಿಯು ಹರಹುವ ಕನ್ನಡ ಬೆಳಗಲಿ ಬೆಳಕದು ಬೆಳಕಿನ ಕನ್ನಡ.

----------------------------------

ನೋಂದಣಿ ಐಡಿ : KPFS2-6819

23
Votes
299
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top