ಪ್ರಿಯಕರನ ನೆನಪು ಹಿತಕರ
ರಚನೆ : ವಾಣಿ ಎಸ್
----------------------------------
ಎಲ್ಲೆಲ್ಲೂ ಕಾಣುವೆ ಕನಸೆಲ್ಲಾ ಕಾಡುವೆ ಕಣ್ಣೊಳಗೆ ಸೆರೆಯಾಗಿ ಹೃದಯನ್ಗಳದಿ ಬೆಳಕಾದೆ ನನ್ನೀ ಹೆಜ್ಜೆಯ ಸಪ್ಪಳಕ್ಕೆ ನಿನ್ನದೇ ಗುರುತು ಜಾದು ಮಾಡಿದ ಮೋಡಿಗಾರ ನೀನೇನಾ...!! ನನ್ನೊಳಗೆ ಬಯಸಿದೆ ನಿನ್ನೊಂದಿಗೆ ಒಡನಾಟ ನಿನ್ನ ನೆನೆದು ನೆನೆದು ನನ್ನೊಳಗೆ ಪರದಾಟ ಕಾಡದಿರು ನೀನು ಹೇಳಲು ಸಂಕೋಚ ನನಗೆ ಮುದ್ದು ಮಾಡುವ ಬಯಕೆ ಹೆಚ್ಚುತ್ತಿದೆ ಕುಡಿ ನೋಟ ಸೆಳೆದ ಮಾಯಗಾರ ನೀನೇನಾ...!! ನೀ ಬರುವ ದಾರಿಯ ಕಾಯುತ್ತಿರುವೆ ನನಗೆ ತಿಳಿಯದೆ ನಿನ್ನಯ ಹುಡುಕಾಟ ಮನಸೊಳಗೆ ಸಂಭ್ರಮ ನಿನ್ನ ನೋಡಲು ಕೆಂದುಟಿಗೆ ಕಾತುರ ನಿನ್ನೊಡನೆ ಪಿಸು ಮಾತಾಡಲು ನನ್ನೀ ಹೃದಯ ಗೆದ್ದ ಸಾಹುಕಾರ ನೀನೇನಾ....
----------------------------------
ನೋಂದಣಿ ಐಡಿ : KPFS2-6802