Submission 2686

ನಿನ್ನೊಡಲು

ರಚನೆ : ದೇವೇಂದ್ರ ಹುಡಾ

----------------------------------

ಬಿರಿಬಿಸಿಲ ಲೆಕ್ಕಿಸದೆ ಕರಿನೆರಳ ಸರಿಸಿ ಸಾಗುವಾಗ, ಸಾಲಾಗುವ ದುಃಖ ದುಮ್ಮಾನಗಳಿಗೆ, ಬಳಲಿಕೆ ಇಲ್ಲವೆ ನಿನ್ನೊಡಲು ? ಕಡುಗಪ್ಪು ಕಂಗಳಲಿ ಮಿಂಚುಳ್ಳಿಯ ಮಿಣುಕು, ಮತ್ತದೇ ನೆನಪಿನ ಬದುಕು. ಮಡುಗಟ್ಟಿರುವ ಮಾತು ಮೌನವಾದಾಗ, ಮಾತೇ... ನಿನ್ನೊಡಲೆ ಕೊಡಲು. ಬೇಕು-ಬೇಡಗಳ ಜೀಕುವಿಕೆಯಲಿ ಸಾಗಿ ಮೂಕವಾಗದಿರಲಿ ಮೌನ ವೇದನೆಗಳು. ಕಂಡ ಕನಸುಗಳೆಲ್ಲ ನನಸಾಗಲಿ ನಿನ್ನೀ ಮಡಿಲು. ಮಮತೆಯ ಮಮಕಾರದಲಿ ಸಿಲುಕಿ, ಮರೆಮಾಚದಿರು ಪ್ರಕೃತಿತನವ. ಪ್ರತಿದಿನದ ಆ ಕ್ಷಣವು ನಿನ್ನೀ ತನವು, ನೀನು ನಿನಗಲ್ಲ, ನೀನು ಜಗಕೆಲ್ಲ.

----------------------------------

ನೋಂದಣಿ ಐಡಿ : KPFS2-6801

3
Votes
127
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top