ಧನ್ಯರಾದೇವು ಹುಟ್ಟಿ ಭರತ ಖಂಡದಲಿ
ರಚನೆ : ಅಭಿಷೇಕ .ಬಸವಣ್ಣೆಪ್ಪ. ಗಾಣಗಿ
----------------------------------
ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವದ ಅರಸರು ನಾವು ಸಮೃದ್ದ ಪರಿಸರ ಅನುಭವಿಸುವ ಯೋಗಿಗಳು ನಾವು ಮಾನವ ಜನ್ಮದ ಶ್ರೇಷ್ಠತೆಗೆ ಅರ್ಥ ನೀಡಿದವರು ನಾವು ತಾಳ್ಮೆಯಲಿ ನಂಬಿಕೆ ಇಟ್ಟವರು ನಾವು ಪ್ರೀತಿಯಲ್ಲಿ ವಿಶ್ವಾಸ ಬಿತ್ತಿದವರು ನಾವು... ನೀಲ ಅಂಗಳದಲ್ಲಿ ಉಪಗ್ರಹ ನೆಗೆಸಿದ ಧೀರರು ನಾವು ದಕ್ಷಿಣ ಭಾಗದಲ್ಲಿ ಚಂದ್ರ ಚುಂಬನ ಮಾಡಿದ ಮೊದಲಿಗರು ನಾವು ಒಬ್ಬ ಭಾರತೀಯನಾಗಿ ನಾನು ಹೇಳುವ ಮಾತು ಭಿನ್ನತೆಯಲ್ಲಿ ಏಕತೆ - ತಿರಂಗಕ್ಕೆ ನಿಸ್ವಾರ್ಥತೆ ಏನು ಹೇಳಲಿ ಕರುಣೆ ತುಂಬಿದ ರಾಷ್ಟ್ರದಲ್ಲಿ ಮರಳಿ ಹುಟ್ಟಲಿ ಈ ಜೀವ ಭಾರತಾಂಬೆಯ ಮಡಿಲಲಿ..
----------------------------------
ನೋಂದಣಿ ಐಡಿ : KPFS2-6768