Submission 2632

ಹಿತ ನುಡಿ

ರಚನೆ : ಸ್ನೇಹ ಶಶಿಧರ

----------------------------------

ಮೂರಲಿ ಹಿತವು ಆರೆಂದು ಅರಿತುಕೋ, ನೀ ಹಿತವ ಬೇಡೆಂದು ತಿಳಿದುಕೋ! ಸತ್ಯವೋ ಅಸತ್ಯವೋ ನಡೆದ ವಾದ, ನಾ ಮೇಲೆ ನೀ ಮೇಲೆ ಎಂಬ ಸಂವಾದ! ಸತ್ಯವೇ ಜೀವದ ಆಧಾರ, ಎಲ್ಲ ಆದರ್ಶಗಳ ಹರಿಕಾರ, ಕಟುವಾಗಿ ಮಿಥ್ಯದ ಸಂಹಾರ, ಸತ್ಯಕ್ಕೆ ಹಾಕು ನೀ ಜಯಕಾರ! ಕೊಲ್ಲುವೇ ನೀ ಸದಾ ಹರಿತ, ಮುದ ನೀಡುವ ನಾನೇ ಹಿತ, ನಿನ್ನಿದಾಯಿತಲ್ಲ ಬ್ರಹ್ಮಹತ್ಯಾ, ಪ್ರಿಯವ ನುಡಿವುದೇ ಅಸತ್ಯ, ಸತ್ಯಾಸತ್ಯದಲ್ಲಾವುದು ದೀತ್ಯ? ಎರಡಕ್ಕೂ ಹೆಚ್ಚು ಅಪಾಯ ಅರ್ಧಸತ್ಯ!

----------------------------------

ನೋಂದಣಿ ಐಡಿ : KPFS2-6767

49
Votes
356
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top