ತುಳಿದ ಜೀವನ
ರಚನೆ : ಮನಾಲಿ ಮಾಸ್ತಿ ಮೊಗೇರ
----------------------------------
ನೀಡುವುದು ನಮಗೆ ಮುಳ್ಳಿನಿಂದ ರಕ್ಷಣೆ; ಆದರೂ ಅದಕ್ಕೆ ಸಿಗದು ಜನರಿಂದ ಮನ್ನಣೆ. ಚಪ್ಪಲಿಯನ್ನು ಇಡುವೆವು ಹೊರಗಡೆ; ಅದನ್ನು ನಾಯಿ ಕಚ್ಚಲು ಬರುವುದು ಮನೆ ಕಡೆ. ಗಂಡ ಹೆಂಡರು ತಿಳಿಯಬೇಕಾದ ಚಪ್ಪಲಿಯ ಮೋಡಿ; ಒಂದನ್ನು ಬಿಟ್ಟು ಇನ್ನೊಂದು ಇರದ ಸತ್ಯ ನೋಡಿ. ಚಪ್ಪಲಿ ಯಾವಾಗಲೂ ಇರುವುದು ಜೋಡಿ; ಕಲಿಯಬೇಕು ದಂಪತಿಗಳು ಅದನ್ನು ನೋಡಿ. ಮಾಡುವೆವು ಚಪ್ಪಲಿಯ ಮೇಲೆ ನಿರ್ಲಕ್ಷೆ; ತಿಳಿಯದು ನಮಗೆ ಅದುವೇ ನಮ್ಮ ಪಾದರಕ್ಷೆ. ಇದುವೇ ನಾವು ಧರಿಸುವ ಪಾದುಕೆ; ಅದರ ಸಂಕಟ ತಿಳಿಯದ ನಾವು ಧರಿಸುವುದಾದರೂ ಏತಕೆ?
----------------------------------
ನೋಂದಣಿ ಐಡಿ : KPFS2-6769