Submission 2470

ನೋಟಬುಕ್ಕಿನ ಕೊನೆಯ ಪುಟಗಳು.

ರಚನೆ : ಡಾ..ಪ್ರಕಾಶ ಗ.ಖಾಡೆ

----------------------------------

ನೋಟಬುಕ್ಕಿನ ಕೊನೆಯ ಪುಟಗಳು ವಿರಾಮಕ್ಕೆ ಗೀಚಿದ ಅಕ್ಷರಗಳಲ್ಲ, ಪುಟ್ಟ ಪುಟ್ಟ ಚರಿತ್ರೆ ಕಟ್ಟಿಕೊಡುವ ನೋವಲ್ಲು ನಲಿವ ಹಂಚಿಕೊಂಡ ಪದಗಳು. ಅಪ್ಪನ ದಿನಸಿ ಅಂಗಡಿಯ ಲೆಕ್ಕಗಳು ಅವ್ವ ಕೂಡಿಟ್ಟ ರೊಕ್ಕದ ಮೊತ್ತ. ಸಾಲದ್ದಕ್ಕೆ ಅವರಿವರಲ್ಲಿ ಪಡೆದ ಕೈಗಡಗಳ ಚುಕ್ತಾ ಮಾಡಿದ ಗೀಚುಗಳು ಹಿರಿಕವಿಗಳ ಪಂದ್ಯಗಳಿಂದ ಎತ್ತಿದ ಪ್ರೇಮದ ಸಾಲುಗಳು ಚಿತ್ರವಿಚಿತ್ರ ಚಿತ್ರಗಳು ಬರೆದವನಿಗೇ ಒಮ್ಮೊಮ್ಮೆ ಅರ್ಥವಾಗದ ಗೀಚುಗಳು ಯಾವ ಅಸ್ತಿತ್ವಕ್ಕೂ ಉಳಿಯದೆ ಕೊನೆಗೆ ನೆನಪಿನ ರದ್ದಿಗೆ ಸೇರುವ ಪುಟ ಪುಟವೂ ಸಂಪುಟ.

----------------------------------

ನೋಂದಣಿ ಐಡಿ : KPFS2-6649

2
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top