ದೂರಾದೆಯ
ರಚನೆ : ರಕ್ಷಿತ್ ಶೆಟ್ಟಿ
----------------------------------
ಹೇಳದೆ ಕೇಳದೆ ದೂರಾದೆಯ ಜೀವವೆ ಕಾದು ಕುಳಿತ ಕಣ್ಣ ಹನಿಯು ಜಾರಿದೇ ನಿನ್ನನು ನೋಡದೆ ಮುಗಿದು ಹೋದ ಪ್ರೀತಿ ಹಾಡಿದು ಕಣ್ಣೀರಲ್ಲೆ ಪದಗಳ ಬರೆದು ನೋವಿನಾ ರಾಗವ ನುಡಿಸಿದೆ ನಗುವಿನಾ ತಾಳವಾ ಮರೆಸಿದೆ ಮನಸಿನ ಮಿಡಿತವ ಮಣಿಸಿದೆ ಕನಸಿನ ಗೋಪುರ ಕೆಡವಿದೆ ಕಾಯುತ ಜೀವವು ಸವೆದಿದೆ ಕಾಲನ ಹಾದಿಯ ಕಾದಿದೆ ಪ್ರೀತಿಯ ರೀತಿಗೆ ಮರೆತುಬಿಟ್ಟೆನು ಜಗವನು ಕಾದು ಕುಳಿತ ನನ್ನ ಮನಕೆ ಹೇಳಿದೆ ಮರೆಯಲು ನಿನ್ನನು
----------------------------------
ನೋಂದಣಿ ಐಡಿ : KPFS2-6647