ಹಾರುವುದ ಮರೆಯುವೆ
ರಚನೆ : ರಕ್ಷಿತ್ ಎಂ ಬಿ
----------------------------------
ನೀನಿಲ್ಲದೇ ಬಾನ ಬಣ್ಣ ಬಿಳಿಯಾಗಿದೆ, ನೀನಿಲ್ಲದೇ ಬಾನ ಬಣ್ಣ ತಿಳಿಯಾಗಿದೆ. ನೆಲನೆಂದೂ ಬಿಡೆನೆಂದು ನೆಲಕಚ್ಚಿ ಬಿದ್ದಿರೆ; ನಡುಹಿಡಿದು ಮೇಲೆತ್ತಿ ರೆಕ್ಕೆಯನು ತೀಡಿದೆ. ನಿನ್ನೊಬ್ಬಳನು ಬಿಟ್ಟು ನಾನೊಂಟಿ ಹಾರಲೆ? ಹಾರುವುದ ಮರೆಯುವೆ! ಹಾಡುವುದ ಮರೆಯುವೆ! ನಿನ್ನೊಡನೆ ಇರಲಾಸೆ ನಿನ್ನಿನಿಯ ನಾಗಲೇ?
----------------------------------
ನೋಂದಣಿ ಐಡಿ : KPFS2-6646