Submission 2472

ಆಕೆ ನಿರಹಂಕಾರಿ

ರಚನೆ : ಅಶ್ವಿನಿ ಮಂಜುನಾಥ ಹೆಗಡೆ

----------------------------------

ಹುಟ್ಟುತ್ತಲೇ ಹೆಣ್ಣೆಂದು ಜರೆಯುವರು ನಕ್ಕರೆ ಬೈದು ನೀನು ಹೆಣ್ಣೆಂಬರು ಓದೇನು ಉದ್ಧಾರವಾಗಬೇಕು ಕೇಳುವರು ಆಸೆ ಆಕಾಂಕ್ಷೆಗಳನ್ನು ತೂರಿ ಮದುವೆ ಮಾಡುವರು ಆದರೂ ಆಕೆ ನಿರಹಂಕಾರಿ ಹೆಣ್ಣೆಂದು ಯಾರದೋ ಮನೆಗೆ ಹೋಗುವಳು ನಂಬಿಕೆಯಿಂದ ಎಲ್ಲರನು ಸತ್ಕರಿಸುವಳು ಪ್ರೀತಿಯಿಂದ ತಪ್ಪಿಲ್ಲದಿದ್ದರೂ ತಲೆಬಾಗುವಳು ಶರಣಾಗತಿಯಿಂದ ಬಯಸುವರು ವಂಶೋದ್ಧಾರಕನನ್ನು ಅಹಂಕಾರದಿಂದ ಆದರೂ ಆಕೆ ನಿರಹಂಕಾರಿ ಹೆಣ್ಣೆಂದು ಮಕ್ಕಳ ಪಾಲನೆಯಲ್ಲಿ ಮರೆತಳು ತನ್ನ ನೋವ ಕಾಡುತ್ತಿದ್ದರೂ ಬಚ್ಚಿಡುವಳು ಒಂಟಿ ಭಾವ ದುಡಿದರೂ ಸಂಭಾವನೆ ಇಲ್ಲದ ಏಕೈಕ ಜೀವ ತನ್ನವರ ಏಳಿಗೆ ಬಯಸಿ ಎದುರು ನೋಡುವಳು ಸಾವ ಆದರೂ ಆಕೆ ನಿರಹಂಕಾರಿ ಹೆಣ್ಣೆಂದು.

----------------------------------

ನೋಂದಣಿ ಐಡಿ : KPFS2-6651

1
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top