ನನ್ನ ಹಳ್ಳಿ
ರಚನೆ : ಕುಬೇಂದ್ರ
----------------------------------
ಎಷ್ಟು ಚಂದ ಈ ನನ್ನ ಹಳ್ಳಿ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದೆ ಸಂಬಂಧದ ಬಳ್ಳಿ ಪ್ರತಿ ಮನೆಯ ಮುಂದೆ ಹಸಿರು ಗಿಡಗಳ ಆಲಿಂಗನ ಪ್ರಾಣಿಗಳಿಗೆ ಕರುಣೆ ತುಂಬಿದ ಜನರ ಸುಂದರ ಜೀವನ ನನ್ನ ಈ ಹಳ್ಳಿಯು ಒಂದೇ ಮನೆಯ ಕುಟುಂಬವಿದ್ದಂತೆ ಅದರಲ್ಲಿನ ಜನಗಳು ವಾಸಮಾಡುವರು ಸಂಬಂಧಗಳಂತೆ ಬದುಕುವರು ಒಬ್ಬರಿಗೊಬ್ಬರು ಸಹಾಯದ ಸಿಬ್ಬಂದಿಗಳಂತೆ ಒಂದೆ ತಾಯಿಯ ಗರ್ಭದಲ್ಲಿ ಜನಿಸಿದ ಅಣ್ಣಾತಮ್ಮರಂತೆ ಇಲ್ಲಿಯೇ ಕಂಡೆ ನಾನೊಂದು ಸತ್ಯ, ಹಳ್ಳಿಯಲ್ಲಿ ಹೊಂದಾಣಿಕೆ ಬದುಕೆ ನಿತ್ಯ ಹಳ್ಳಿಯ ಜನರು ಮಾಡುವರು ರೈತಾಪಿ ಕೆಲಸ ಬೆಳಗಿನಿಂದ ಸಾಯಂಕಾಲದ ವರೆಗೆ ಧರೆಯ ಉಪನ್ಯಾಸ ಎಷ್ಟೋ ಕಳೆದರು ಮಾಸ, ಬದಲಾಗದು ಜನಗಳ ಮಂದಹಾಸ ಹುಟ್ಟಿನಿಂದ ಸಾವಿನ ವರೆಗೂ ಪ್ರತಿಯೊಬ್ಬರಾಗುವರು ಭೂಮಿಯ ದಾಸ ಇದೇ ನನ್ನ ಹಳ್ಳಿಯ ಪ್ರತಿದಿನದ ನಿಜಾ ಜೀವನದ ಪಾಠ ಸಾಹಸ, ಶ್ರದ್ದೆ ಮತ್ತು ನೆಲದ ನಿತ್ಯ ಜೀವನದ ಪ್ರಭಾತ
----------------------------------
ನೋಂದಣಿ ಐಡಿ : KPFS2-6638