Submission 2434

ನನ್ನವನು

ರಚನೆ : ಪಲ್ಲವಿ ಎನ್.ವಿ.

----------------------------------

ಜೊತೆಯಲ್ಲಿರುವ ಕನಸ ಕಟ್ಟಿದ್ದವನು ನನ್ನವನು, ಮತ್ತೆ ಬರುವೆನೆಂಬ ಸೂಚನೆಯನ್ನು ನೀಡದೆ ಬಿಟ್ಟು ಹೋದವನು ನನ್ನವನು, ಎಲ್ಲೇ ಇದ್ದರೂ ನಗು ನಗುತ್ತಾ ಏರಲು ನನ್ನವನು, ನೀನು ಬಂದರೂ ಬಾರದಿದ್ದರೂ ನೀನೆಂದು ನನ್ನವನು, ಎಷ್ಟೇ ಯೋಚಿಸಿದರು ಸಿಗಲಾರದವನ್ನು ನನ್ನವನು, ಯೋಚನೆಗಳಿಗೂ ಮೀರಿದ ಯೋಚನೆಗಳಾಗಿ ಉಳಿದವನ್ನು ನನ್ನವನು, ಸಿಗದ ಉತ್ತರಗಳ ಹುಡುಕೆಂದು ಬಿಟ್ಟು ಹೋದವನು ನನ್ನವನು, ನಿನ್ನ ನಗು ನೆನಪಾಗುತ್ತೆ, ನಾನು ಮಾತನಾಡುವಾಗ, ನಿನ್ನು ಮಾತುಗಳು ನೆನಪಾಗುತ್ತೆ ನಾನು ಸುಮ್ಮನೆ ಕುಳಿತಾಗ, ನಾ ಕಾಯುತ್ತಿರುತ್ತೇನೆ ಕೇಳಲು ನಿನ್ನ ಮಾತುಗಳನ್ನು, ಮಾತನಾಡದೆ ನೋಯಿಸಬೇಡ ನನ್ನ ಮನಸ್ಸನ್ನು, ನಿನಗಾಗಿ ಮಿಸಲಿಟ್ಟಿರುವೆನು ನಿನ್ನ ಸಮಯವೂ ಬೇಕಾಗಿದೆ ನನಗಿನ್ನೂ, ಇರಲಾಗುವುದಲ್ಲ ನಿನ್ನ ಬಿಟ್ಟು ತುಂಬಾ ಘಳಿಗೆ, ಸದಾ ನಿನ್ನ ನೋಡುವಾಸೆ ನನ್ನ ಕಣ್ಣುಗಳಿಗೆ.

----------------------------------

ನೋಂದಣಿ ಐಡಿ : KPFS2-6622

0
Votes
106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top