Submission 2426

ಎಲ್ಲಿಗೆ ಹೊರಟೆ ಓ ಮಾನವ

ರಚನೆ : ಮಲ್ಲನಗೌಡ ಎಸ್ ಚಿನ್ನಪ್ಪಗೌಡರ್

----------------------------------

ಎಲ್ಲಿಗೆ ಹೊರಟೆ ಓ ಮಾನವಾ ತಂದು ಹಚ್ಚಿ ಈ ಸಮಾಜವಾ ನಗರೀಕರಣವೆಂದು ಗಿಡ ಮರ ಕಡೆದೆ ಅಗಲೀಕರಣವೆಂದು ಭೂಮಿ ಕಬಳಿಸಿದೆ ರೈತನ ಭೂಮಿ ಕಸಿದು ಸೈಟ್ ಮಾಡಿದೆ,ಕಾರ್ಖಾನೆ ಮಾಡಿದೆ ಎಲ್ಲಿಗೆ ಹೊರಟೆ ಓ ಮಾನವಾ ತಂದು ಹಚ್ಚಿ ಈ ಸಮಾಜವಾ ಉಸಿಕಿನ ಆಸೆಗೆ ನದಿ ಬತ್ತಿಸಿದೆ ಬೋರವೆಲ್ ಎಂದು ಭೂಮಿ ಕೊರೆಸಿದೆ ನಿನ್ನ ಆಸೆಗೆ ಗಣಿಗಾರಿಕೆ ಮಾಡಿದೆ ಸಮಾಜ ಹಾಳು ಮಾಡಿ ಎಲ್ಲಿಗೆ ಹೊರಟೆ ಓ ಮಾನವಾ ಹಣದ ಆಸೆಗೆ ಸಂಬಂದವ ಕಳೆದೆ ಎಲ್ಲವ ಕಳೆದು ಏನು ಪಡೆದೆ ನೀ ??? ನೀನು ಬಡವನಾದರೇನು!! ಶ್ರೀಮಂತನಾದರೇನು!! ಕರ್ಮದ ಮುಂದೆ ತಲೆ ಬಾಗಲೇಬೇಕು.. ಲೆಕ್ಕ ಕೊಡಲೇಬೇಕು ಎಲ್ಲಿಗೆ ಹೊರಟೆ ಓ ಮಾನವಾ ತಂದು ಹಚ್ಚಿ ಈ ಸಮಾಜವಾ.

----------------------------------

ನೋಂದಣಿ ಐಡಿ : KPFS2-6616

4
Votes
177
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top