Submission 2428

ಬೇಕಾಗಿದ್ದೀರಿ.. ನೀವು.

ರಚನೆ : ಶಿವಕುಮಾರ ಕಾರೇಪುರ

----------------------------------

ಇಲ್ಲಿ ಕೇಳಿ, ಸ್ವಲ್ಪ ನಿಲ್ಲಿ. ಕಂಬನಿ ತುಂಬಿ ಮಂಜಾಗಿವೆ ಕಣ್ಣು, ಈ ಸೂಜಿಗೆ ದಾರ ಪೋಣಿಸಿ ಕೊಡಿ ಹರಿದ ಮನಸುಗಳ ಹೊಲಿಯಬೇಕಾಗಿದೆ. ಚೂರು ಕೈ ಜೋಡಿಸಿ, ಸಿಮೆಂಟು ಮರಳು ಕಲಸಿದ್ದೇನೆ, ಇಟ್ಟಿಗೆಗಳನ್ನು ಎತ್ತಿಕೊಡಿ ಅವನ ಇವನ ನಡುವಿನ ಅಹಮ್ಮಿನ ಗೋಡೆ ಕೆಡವಿ, ಸೇತುವೆ ಕಟ್ಟಬೇಕಾಗಿದೆ. ನನ್ನ ಕುಲುಮೆಗೆ ಚೂರು ಬೆಂಕಿ ತಾಕಿಸಿ, ಕೆಂಡ ಮಾಡುತ್ತೇನೆ. ಅವಳು - ಇವಳ ನ್ನು ಬಂಧಿಸಿರುವ ಜಾತಿ-ಮತ-ಧರ್ಮದ ಕೋಳವನ್ನು ಒಡೆದು ಚೂರು ಮಾಡಬೇಕಾಗಿದೆ. ಸರ್ವ ಜನಾಂಗದ ತೋಟ ಒಣಗುತ್ತಿದೆ ಬನ್ನಿ, ಒಂದೊಂದು ಕೊಡ ನೀರು ತನ್ನಿ.

----------------------------------

ನೋಂದಣಿ ಐಡಿ : KPFS2-6617

3
Votes
112
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top