Submission 2384

ನನ್ನ ಕಾವ್ಯಕ್ಕೇಕೆ ಸುಶ್ರಾವ್ಯ ?

ರಚನೆ : ಚಂದನ ಬಿ.ವಿ.

----------------------------------

ಸಿಟ್ಟು, ಸೆಡುವುಗಳು ಸಾಕು ಶಾಂತಿ, ಕ್ರಾಂತಿಗಳ ನೆಲೆ ಬೇಕು ಭಾವಗಳೆರೆಡು ಬೆರೆತರಾಯಿತು ಅನಿಸಿದನ್ನು ಅರಳಿಸಲು ಅಣಕು, ಅಸಡ್ಡೆ ಅವಮಾನಗಳು ತೊಡರುಗಳಲ್ಲ ಚುಚ್ಚು ಮಾತುಗಳು ಭಯ ಬಿತ್ತಲಿಲ್ಲ ಎತ್ತರಕ್ಕೆರುವ, ಬೀಗುವ ಬಲೆಯಲ್ಲಿ ನನ್ನ ಸಾಲುಗಳಿಲ್ಲ ಹೋಲಿಕೆಯ ಗೊಡವೆಯಿಲ್ಲ ನನ್ನ ಕಾವ್ಯಕ್ಕೆ ನನ್ನ ಕಾವ್ಯ ನನ್ನದು ನಾನೆನೆದಂತೆ, ನನ್ನ ಚಿಂತನೆಗಳಂತೆ ಬಂದಂತೆ ಗೀಚುವೆ, ಭಾವನೆಗಳಿಗೆ ಬಾಗುವೆ ಸಾಗುವೆ

----------------------------------

ನೋಂದಣಿ ಐಡಿ : KPFS2-6587

9
Votes
145
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top